Subscribe and Stay UptoDate

Enter your email address:

Delivered by Subscribe and stay upto date

Wednesday, July 8, 2009

ಸುದ್ದಿಗಾರನ ಸೂಪು ಪುರಾಣ - journalist soop story

ಈಗ್ಗೆ ಎರಡು ವರ್ಷದ ಹಿಂದೆ ಕೇಂದ್ರ ವಾಣಿಜ್ಯ ಖಾತೆ ರಾಜ್ಯ ಸಚಿವರಾಗಿದ್ದ ಜೈರಾಂ ರಮೇಶ್ ರವರು ಇಂಡಿಯನ್ ಎಕ್ಸಪ್ರೆಸ್ ಬಳಿ ಇರುವ ಕಾಫಿ ಬೋರ್ಡ್ ನಲ್ಲಿ ಒಂದು ಪತ್ರಿಕಾ ಗೋಷ್ಠಿ ಕರೆದಿದ್ದರು. ನಾನು ಅವಾಗ ಜೈ ಭೀಮ ಗದೆ ಸಂಜೆ ದಿನ ಪತ್ರಿಕೆಯಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದೆ. ನಾನು ಆ ಪತ್ರಿಕಾ ಗೋಷ್ಠಿಗೆ ಹೋಗಿದ್ದೆ. ಅಲ್ಲಿ ಒಂದು ಸ್ವಾರಸ್ಯಕರ ಘಟನೆ ನೆರೆದಿದ್ದ ಪತ್ರಕರ್ತರಿಗೆ ಬಿಟ್ಟಿ ಮನರಂಜನೆ ನೀಡಿತು.
ಸಚಿವರು ಬರುವುದಕ್ಕೆ ಮುನ್ನ ಅಲ್ಲಿದ್ದ ಸಂಘಟಕರು ಎಲ್ಲ ಮಾಧ್ಯಮ ಪ್ರತಿನಿಧಿಗಳಿಗೆ ಕಾಫಿ ತಂದುಕೊಟ್ಟರು. ಅದನ್ನು ಕಂಡು ದೊಡ್ಡ ಪತ್ರಿಕೆಯ ಹಿರಿಯ ಪತ್ರಕರ್ತರೊಬ್ಬರಿಗೆ ಪಿತ್ತ ನೆತ್ತಿಗೇರಿತು. ಸಂಘಟಕರನ್ನು ಕರೆದು ಏನಯ್ಯಾ ! ಈಗ ಸಮಯ ಒಂದು ಗಂಟೆಯಾಗಿದೆ. ಕಾಫಿ ಕುಡಿಯೋ ಹೊತ್ತೇ ? ಇಷ್ಟೊತ್ತಿನಲ್ಲಿ ಕೊಡುವುದಾದರೆ ಸೂಪು ಕೊಡಬೇಕೆಂಬ ತಿಳುವಳಿಕೆ ಇಲ್ವಾ ನಿಮಗೆ ? ಎಂದು ರೇಗಾಡಿದರು.
ಅಷ್ಟರಲ್ಲಿ ಸಚಿವರು ಸಭಾಂಗಣಕ್ಕೆ ಆಗಮಿಸಿದರು. ತಮ್ಮ ನಗುವನ್ನು ಬೀರುತ್ತ ಎಂದಿನಂತೆ 'ಸ್ನೇಹಿತರೆ ಆರಂಬಿಸೋಣವೇ ಎಂದು ಆಂಗ್ಲ ಭಾಷೆಯಲ್ಲೇ ಕೇಳಿದರು. ಆಗ ಇನ್ನು ಸಿಟ್ಟು ಕಮ್ಮಿಯಾಗದ ಆ ಹಿರಿಯ ಪತ್ರಕರ್ತರು, ಮೊದಲು ಸೂಪು ತರಿಸಿಕೊಡಿ ಆ ಮೇಲೆ ಆರಂಬಿಸಿ ಎಂದು ಇಂಗ್ಲಿಷಿನಲ್ಲೇ ಏರುಧ್ವನಿಯಲ್ಲಿ ಗದರಿದರು.
ಹಿನ್ನೆಲೆ ಅರಿಯದ ಸಚಿವರು ಓ .. ಶ್ಯೂರ್ ಎಂದು ಸೂಪು ತಂದು ಕೊಡುವಂತೆ ಸಿಬ್ಬಂದಿಗೆ ಸೂಚಿಸಿದರು. ಇನ್ನುಳಿದ ಸುದ್ದಿಗಾರರಿಗೆ ಇದರಿಂದ ತೀವ್ರ ಮುಜುಗರವೆನಿಸಿತಾದರೂ ಆ ಹಿರಿಯ ಪತ್ರಕರ್ತರ ರದ್ಧಾಂತದಿಂದಾಗಿ ಎಲ್ಲರಿಗೂ ಸೂಪು ಬಂತು. ಸರ್ವ್ ಮಾಡುವಾತ ಸೂಪಿಗಾಗಿ ರಗಳೆ ಮಾಡಿದ ಆ ಹಿರಿಯ ಪತ್ರಕರ್ತರಿಗೆ ಎರಡು ಬೌಲ್ ನಲ್ಲಿ ಸೂಪು ತಂದಿಟ್ಟ.
ಪತ್ರಿಕಾ ಗೋಷ್ಠಿ ಮುಗಿದ ನಂತರ ಲಂಚ್ ವ್ಯವಸ್ಥೆ ಮಾಡಲಾಗಿತ್ತು. ಆಗ ಸಚಿವರೇ ಸ್ವತಃ ಮತ್ತೊಂದು ಬೌಲ್ ಸೂಪು ತರಿಸಿ ಆ ವ್ಯಕ್ತಿಗೆ ಕೊಟ್ಟರು. ಅಲ್ಲಿಗೆ ಮುಗಿಯಿತು ನೋಡಿ '' ಸುದ್ದಿಗಾರನ ಸೂಪು ಪುರಾಣ''.

No comments: