ಭುವಿಯಿಂದ ತೆರಳಿದ್ ನಿನ್ನ ಮರೆಯಲ್ಲ ದೊಡ್ಡವ್ವ ...
ನಿನ್ನ ಕೈಯ ತುತ್ತು ತಿಂದು ಬೆಳೆದಿಹೆವು ನಾವಮ್ಮ ...
ದೊಡ್ಡವ್ವ ನಿನ್ನ ಮರೆಯಲ್ಲ ದೊಡ್ಡವ್ವ .. ಪಲ್ಲವಿ
ಕಳಸೆ ಎಂಬ ಪುಟ್ಟ ಊರಲ್ಲಿ ಜನನ ಕಳಸ ಹೂಡಿದೆ ...
ಬೆನವಳ್ಳಿ ಎಂಬ ಊರಿಗೆ ಕಳಸ ಕನ್ನಡಿ ತಂದಿರುವೆ
ಪೇಟೆಯಲ್ಲಿ ಅಂತ್ಯ ಕಳಸ ಹೂಡಿ ನಮ್ಮನ್ನಗಲಿರುವೆ ದೊಡ್ಡವ್ವ
ಲಗ್ನವಾಗಿ ಕೆಲವೇ ಸಮಯದಿ ಪತಿ ಹೀನಳಾಗಿಹೆ ....
ದುಷ್ಟ ಜನರ ಮಧ್ಯದಿ ಮಗಳನು ಶಿಕ್ಷಣವಂತಳ ಮಾಡಿದೆ ....
ನಿನ್ನಂತ ಶಿಸ್ತಿನ ಬದುಕ ಬಾಳಲು ಬಾರದು ಯಾರಿಗೂ .... ದೊಡ್ಡವ್ವ
ತಾಯಿ ಇಲ್ಲದವರಿಗೆ ನೀ ತಾಯಿ ಸ್ಥಾನ ನೀಡಿದೆ .....
ಬಾಯಿ ಬಾರದ ಮಕ್ಕಳ್ಳನ್ನು ಬಲು ಚೆಂದ ಸಾಕಿದೆ ...
ಊರ ಮಂದಿಗೆಲ್ಲಾ ನೀನು ದೊಡ್ದವ್ವಳೆನಿಸಿದೆ .... ದೊಡ್ಡವ್ವ
ಹಗಲು ಇರುಳು ಎನ್ನದೆ ಗೃಹ ದೇವತೆ ಸೇವೆ ಮಾಡಿದೆ...
ಕಾಡಿನಲ್ಲಿದ್ದರು ನೀನು ಕಾಯಕವನ್ನು ತೀರಿಸಿದೆ ....
ಕಾಯಕದಲ್ಲೇ ಕಾನ್ ಮಲ್ಲೇಶನ ಕಂಡ ಕಣ್ಮಣಿಯು ನೀನವ್ವ ದೊಡ್ಡವ್ವ ಭುವಿಯಿಂದ
{ಇಂದು ಜುಲೈ ೧೪ ನನ್ನ ಪೂಜ್ಯ ದೊಡ್ಡವ್ವ ಬೆನವಲ್ಲಿ ದಿ. ಹಾಲಪ್ಪಗೌಡರ ಧರ್ಮ ಪತ್ನಿ ಶ್ರೀಮತಿ ನಾಗಮ್ಮನವರು
ಲಿಂಗೈಕ್ಯರಾದ ದಿನ. ಅವರ ಪುಣ್ಯ ನೆನಪು ಮಾಡುತ್ತ ಅವರ ಬಗ್ಗೆ ೨೦೦೫ ರಲ್ಲಿ ಬರೆದ ಭಕ್ತಿಗೀತೆಯನ್ನು ಪ್ರಕಟಿಸುತ್ತಿದ್ದೇನೆ. }
Subscribe and Stay UptoDate
Tuesday, July 14, 2009
Subscribe to:
Post Comments (Atom)
No comments:
Post a Comment