Subscribe and Stay UptoDate
Saturday, December 18, 2010
ಮಾನವನ ಅಶಾಂತಿಗೆ ವಿಜ್ಞಾನ ಕಾರಣ : ರಂಭಾಪುರಿ ಸ್ವಾಮೀಜಿ : Science is danger to human life : Rambhapuri swamiji
ಹೊಸನಗರ : ಮನುಷ್ಯ ಇಂದು ತನ್ನ ನೆಮ್ಮದಿ ಮತ್ತು ಶಾಂತಿ ಕಳೆದುಕೊಳ್ಳುತ್ತಿರುವುದಕ್ಕೆ ವಿಜ್ಞಾನ ಕಾರಣವಾಗಿದೆ ಎಂದು ಬಾಳೆಹೊನ್ನೂರಿನ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಭಗವತ್ಪಾದರು ಅಬಿಪ್ರಾಯ ಪಟ್ಟಿದ್ದಾರೆ. ಸಮೀಪದ ಬ್ರಹ್ಮೇಶ್ವರ ಗ್ರಾಮದಲ್ಲಿ ನಡೆದ ಜಗದ್ಗುರುಗಳ ಇಷ್ಟಲಿಂಗ ಮಹಾ ಪೂಜೆ ಮತ್ತು ಧರ್ಮ ಜಾಗೃತಿ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಮನುಷ್ಯ ಇಂದು ವಿಜ್ಞಾನವೆಂಬ ಕೀಳು ಕುದುರೆಯನ್ನೇರಿ ಬಹು ವೇಗದಲ್ಲಿ ಸಾಗುತ್ತಿದ್ದಾನೆ. ಆದರೆ ಅಂತಹ ವಿಜ್ಞಾನವೇ ಆತನ ಶಾಂತಿ ಮತ್ತು ನೆಮ್ಮದಿಯನ್ನು ಕಿತ್ತುಕೊಂಡಿದೆ ಎಂಬುದರ ಅರಿವು ಆತನಿಗಿಲ್ಲ. ಮನುಷ್ಯ ಏನೆಲ್ಲಾ ಕಂಡು ಹಿಡಿಯಲು ಸಾಧ್ಯವಿರಬಹುದು ಆದರೆ ಮನಶಾಂತಿಯನ್ನು ಪಡೆಯಲು ಆತನಿಗೆ ಧರ್ಮದ ನೆರಳಲ್ಲಿ ಮಾತ್ರ ಸಾದ್ಯ ಎಂದರು. ಹಿಂದೆ ಗುರಿ ಮುಂದೆ ಗುರು ಇದ್ದರೆ ಸಾಧನೆಯ ಹಾದಿ ಸುಗಮ ಎಂಬ ಆಚಾರ್ಯರ ಅನುಭವದ ಮಾತು ಅಕ್ಷರಶಃ ಸತ್ಯವಾಗಿದ್ದು, ಇದನ್ನು ಮರೆತ ಪರಿಣಾಮ ಆಗಾಗ ಅಲ್ಲಲ್ಲಿ ಅಶಾಂತಿಯ ಅಲೆ ಅಬ್ಬರಿಸುವುದನ್ನು ನಾವೆಲ್ಲ ಕಾಣುತ್ತಿದ್ದೇವೆ. ಆದರೆ ಇಂತಹ ಧರ್ಮ ಜಾಗೃತಿ ಸಮಾರಂಭಗಳ ಮೂಲಕ ಸಮಾಜದಲ್ಲಿ ಸಾಮರಸ್ಯ ಮತ್ತು ಶಾಂತಿ ನೆಲೆಸಲು ಸಾಧ್ಯ ಎಂಬುದನ್ನು ಅರಿತು ಬ್ರಹ್ಮೆಶ್ವರದ ಧರ್ಮ ಬಂಧುಗಳಾದ ಶ್ರೀ ಚನ್ನಬಸಪ್ಪ ಮತ್ತು ಅವರ ಕುಟುಂಬ ವರ್ಗ ಇಂತಹ ಅರ್ಥಗರ್ಭಿತ ಕಾರ್ಯಕ್ರಮವನ್ನು ಆಯೋಜಿಸಿದ್ದು ಜನರಿಗೆ ಅದರ ಸದುಪಯೋಗವನ್ನು ಹಂಚಿದ್ದಾರೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು. ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಸಂಸ್ಥಾನ ಮಳಲಿ ಮಠದ ಶ್ರೀ ಷ ಬ್ರ ಗುರುನಾಗಭೂಷಣ ಶಿವಾಚಾರ್ಯ ಸ್ವಾಮಿಗಳಿಗೆ ಅವರ ದ್ವಾದಶ ವರ್ಧಂತಿ ಮಹೋತ್ಸವದ ಸವಿ ನೆನಪಿಗಾಗಿ ಗುರುರಕ್ಷೆ ನೀಡಿ ಗೌರವಿಸಲಾಯಿತು. ರಂಭಾಪುರಿ ಪೀಠದ ಗುರುಕುಲದ ವಿಧ್ಯಾರ್ಥಿಗಳ ವೇಧಘೋಶದೊಂದಿಗೆ ಆರಂಬವಾದ ಕಾರ್ಯಕ್ರಮವನ್ನು ಪ್ರಶಾಂತ ರಿಪ್ಪನ್ ಪೇಟೆ ನಿರೂಪಿಸಿದರು. ಕೆ.ಎಂ. ಚನ್ನಬಸಪ್ಪ ವಂದಿಸಿದರು.
Subscribe to:
Post Comments (Atom)
No comments:
Post a Comment