Subscribe and Stay UptoDate

Enter your email address:

Delivered by Subscribe and stay upto date

Saturday, December 18, 2010

ಮಳಲಿ ಶ್ರೀಗಳಿಗೆ ಗುರುರಕ್ಷೆ : Malali mutt Guru nagabhushana swamiji Felicitated by Rambhapuri jagadguru

ಸಂಸ್ಥಾನ ಮಳಲಿ ಮಠದ ಶ್ರೀ ಷ ಬ್ರ ಗುರುನಾಗಭೂಷಣ ಶಿವಾಚಾರ್ಯ ಸ್ವಾಮಿಗಳಿಗೆ ಅವರ ದ್ವಾದಶ ವರ್ಧಂತಿ ಮಹೋತ್ಸವದ ಸವಿ ನೆನಪಿಗಾಗಿ ಬ್ರಹ್ಮೆಶ್ವರದಲ್ಲಿ ನಡೆದ ಧರ್ಮ ಜಾಗೃತಿ ಸಮಾರಂಭದಲ್ಲಿ ರಂಭಾಪುರಿ ಜಗದ್ಗುರುಗಳು ಗುರು ರಕ್ಷೆ ನೀಡಿ ಗೌರವಿಸಿದರು.

ರಂಭಾಪುರಿ ಸ್ವಾಮಿಜಿಗೆ ಗೌರವಾರ್ಪಣೆ : Rambhapuri swamiji Felicitated in Brahmeshwara



ಬ್ರಹ್ಮೆಶ್ವರದಲ್ಲಿ ನಡೆದ ಧರ್ಮ ಜಾಗೃತಿ ಸಮಾರಂಭದಲ್ಲಿ ಸಾನಿದ್ಯ ವಹಿಸಿದ್ದ ರಂಭಾಪುರಿ ಜಗದ್ಗುರುಗಳಿಗೆ ಗ್ರಾಮದ ಪರವಾಗಿ ಗೌರವ ಸಮರ್ಪಣೆ ಮಾಡಲಾಯಿತು.

ಮಾನವನ ಅಶಾಂತಿಗೆ ವಿಜ್ಞಾನ ಕಾರಣ : ರಂಭಾಪುರಿ ಸ್ವಾಮೀಜಿ : Science is danger to human life : Rambhapuri swamiji

ಹೊಸನಗರ : ಮನುಷ್ಯ ಇಂದು ತನ್ನ ನೆಮ್ಮದಿ ಮತ್ತು ಶಾಂತಿ ಕಳೆದುಕೊಳ್ಳುತ್ತಿರುವುದಕ್ಕೆ ವಿಜ್ಞಾನ ಕಾರಣವಾಗಿದೆ ಎಂದು ಬಾಳೆಹೊನ್ನೂರಿನ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಭಗವತ್ಪಾದರು ಅಬಿಪ್ರಾಯ ಪಟ್ಟಿದ್ದಾರೆ. ಸಮೀಪದ ಬ್ರಹ್ಮೇಶ್ವರ ಗ್ರಾಮದಲ್ಲಿ ನಡೆದ ಜಗದ್ಗುರುಗಳ ಇಷ್ಟಲಿಂಗ ಮಹಾ ಪೂಜೆ ಮತ್ತು ಧರ್ಮ ಜಾಗೃತಿ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಮನುಷ್ಯ ಇಂದು ವಿಜ್ಞಾನವೆಂಬ ಕೀಳು ಕುದುರೆಯನ್ನೇರಿ ಬಹು ವೇಗದಲ್ಲಿ ಸಾಗುತ್ತಿದ್ದಾನೆ. ಆದರೆ ಅಂತಹ ವಿಜ್ಞಾನವೇ ಆತನ ಶಾಂತಿ ಮತ್ತು ನೆಮ್ಮದಿಯನ್ನು ಕಿತ್ತುಕೊಂಡಿದೆ ಎಂಬುದರ ಅರಿವು ಆತನಿಗಿಲ್ಲ. ಮನುಷ್ಯ ಏನೆಲ್ಲಾ ಕಂಡು ಹಿಡಿಯಲು ಸಾಧ್ಯವಿರಬಹುದು ಆದರೆ ಮನಶಾಂತಿಯನ್ನು ಪಡೆಯಲು ಆತನಿಗೆ ಧರ್ಮದ ನೆರಳಲ್ಲಿ ಮಾತ್ರ ಸಾದ್ಯ ಎಂದರು. ಹಿಂದೆ ಗುರಿ ಮುಂದೆ ಗುರು ಇದ್ದರೆ ಸಾಧನೆಯ ಹಾದಿ ಸುಗಮ ಎಂಬ ಆಚಾರ್ಯರ ಅನುಭವದ ಮಾತು ಅಕ್ಷರಶಃ ಸತ್ಯವಾಗಿದ್ದು, ಇದನ್ನು ಮರೆತ ಪರಿಣಾಮ ಆಗಾಗ ಅಲ್ಲಲ್ಲಿ ಅಶಾಂತಿಯ ಅಲೆ ಅಬ್ಬರಿಸುವುದನ್ನು ನಾವೆಲ್ಲ ಕಾಣುತ್ತಿದ್ದೇವೆ. ಆದರೆ ಇಂತಹ ಧರ್ಮ ಜಾಗೃತಿ ಸಮಾರಂಭಗಳ ಮೂಲಕ ಸಮಾಜದಲ್ಲಿ ಸಾಮರಸ್ಯ ಮತ್ತು ಶಾಂತಿ ನೆಲೆಸಲು ಸಾಧ್ಯ ಎಂಬುದನ್ನು ಅರಿತು ಬ್ರಹ್ಮೆಶ್ವರದ ಧರ್ಮ ಬಂಧುಗಳಾದ ಶ್ರೀ ಚನ್ನಬಸಪ್ಪ ಮತ್ತು ಅವರ ಕುಟುಂಬ ವರ್ಗ ಇಂತಹ ಅರ್ಥಗರ್ಭಿತ ಕಾರ್ಯಕ್ರಮವನ್ನು ಆಯೋಜಿಸಿದ್ದು ಜನರಿಗೆ ಅದರ ಸದುಪಯೋಗವನ್ನು ಹಂಚಿದ್ದಾರೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು. ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಸಂಸ್ಥಾನ ಮಳಲಿ ಮಠದ ಶ್ರೀ ಷ ಬ್ರ ಗುರುನಾಗಭೂಷಣ ಶಿವಾಚಾರ್ಯ ಸ್ವಾಮಿಗಳಿಗೆ ಅವರ ದ್ವಾದಶ ವರ್ಧಂತಿ ಮಹೋತ್ಸವದ ಸವಿ ನೆನಪಿಗಾಗಿ ಗುರುರಕ್ಷೆ ನೀಡಿ ಗೌರವಿಸಲಾಯಿತು. ರಂಭಾಪುರಿ ಪೀಠದ ಗುರುಕುಲದ ವಿಧ್ಯಾರ್ಥಿಗಳ ವೇಧಘೋಶದೊಂದಿಗೆ ಆರಂಬವಾದ ಕಾರ್ಯಕ್ರಮವನ್ನು ಪ್ರಶಾಂತ ರಿಪ್ಪನ್ ಪೇಟೆ ನಿರೂಪಿಸಿದರು. ಕೆ.ಎಂ. ಚನ್ನಬಸಪ್ಪ ವಂದಿಸಿದರು.

Wednesday, December 1, 2010

ದೊಡ್ಡಮ್ಮ : moolegadde doddamma Annapurnamma death

ನಮೋ ನಮೋ ಅನ್ನಪೂರ್ಣ, ಮೂಲೆಗದ್ದೆಯ ಹೂರಣ
ಮುಗಿಸಿ ಹೋದಿರಾ ಜೀವನ ಪೂರ್ಣ
ಮರೆಯಲಾಗದು ನಿಮ್ಮ ಶ್ರೀಚರಣ
ಬಿಟ್ಟು ಹೋದಿರಾ ಸರ್ವ ಸುವರ್ಣ
ಕಟ್ಟಿ ಕರೆದರೆ ಕೈಲಾಸದಲ್ಲಿ ತೋರಣ ?
ಹೋಗಲೇನಿತ್ತು ಇಷ್ಟೊಂದು ಅವಸರ
ಮರುಳ ಮಲ್ಲೇಶ್ವರ ಬಂದು ನಿಂತನೇ ಹತ್ತಿರ


(ಮೂಲೆಗದ್ದೆ ದೊಡ್ಡಮ್ಮ ೨೮/೧೧/೧೦ ರಂದು ಲಿಂಗೈಕ್ಯರಾದ ನಂತರ ಅವರ ನೆನಪಿಗಾಗಿ ಬರೆದ ವಚನ)



Sunday, October 31, 2010

ವಚನಾರ್ಪಣೆ : Khan malleshwara vachana

ಹರಿತ ಹಲ್ಲುಗಳ ನಡುವೆ ನಾಲಗೆ ಬದುಕುತ್ತಿಲ್ಲವೇ ?
ರಾಶಿ ಮುಳ್ಳುಗಳ ನಡುವೆ ಹೂವು ಅರಳುತ್ತಿಲ್ಲವೇ ?
ದುಷ್ಟ ಜನರ ನಡುವೆಯೂ ಸತ್ಯವಂತ ಬದುಕಲು ಸಾದ್ಯ
ಕಷ್ಟ ಕೋಟಿ ಬಂದರೂ ನಿಷ್ಠೆಯಿಂದಿರಲು ಸಾದ್ಯ
ಮರುಳ ಮಲ್ಲೇಶ್ವರ ಇದಕೆ ಛಲ ಬೇಕು ನೋಡ

Sunday, July 4, 2010

ವಚನಾರ್ಪಣೆ : Khan malleshwara vachana

ನೆರೆ ಮನೆಯ ಹಿರಿಯರ ಕಂಡರೆ ಎಲ್ಲಿಲ್ಲದ ಗೌರವ
ಮನೆಯಲ್ಲಿರುವ ಅಜ್ಜಿ ತಾತನ ಕಂಡರೆ ಇನ್ನಿಲ್ಲದ ತಾತ್ಸಾರ
ಗುಡಿ ಗೋಪುರಕ್ಕೆ ಹೋಗಿ ಅಡ್ಡ ಅಡ್ಡ ಬೀಳುವರು
ಕೊರಳ ಲಿಂಗಕ್ಕೆ ಜಗುಲಿ ಮೇಲಿನ ಗೂಟವೇ ಗತಿ
ಇಂತವರನೇನೆಂದು ಕರೆಯಲಿ ಹೇಳಾ ಮರುಳ ಮಲ್ಲೇಶ್ವರ

Monday, April 26, 2010

ಟಿ ವಿ ೯ ವಾರ್ಷಿಕೋತ್ಸವ : TV9 first year Anniversary

ನಿರಂತರ ಕನ್ನಡ ವಾರ್ತಾ ವಾಹಿನಿ
ಉತ್ತಮ ಸಮಾಜದ ಗಟ್ಟಿ ಧ್ವನಿ
ಆಚರಿಸುತ್ತಿದೆ ಪ್ರಥಮ ಜಯಂತಿ
ಗಳಿಸಿದೆ ಜನರ ಶಾಶ್ವತ ಪ್ರೀತಿ.

ಒಂದೇ ವರ್ಷದ ಅಲ್ಪ ಅವಧಿ
ಮಾಧ್ಯಮ ಕ್ಷೇತ್ರದಿ ಮಾಡಿದೆ ಕ್ರಾಂತಿ
ಭ್ರಷ್ಟರಿಗಂತು ಬಿಡಿಸಿದೆ ಬ್ರಾಂತಿ
ನೊಂದ ಜನರಿಗೆ ಕೊಡಿಸಿದೆ ಶಾಂತಿ

ಚಿತ್ರ ತಾರೆಯರ ಸಖತ್ ಮಾತು
ರಾಜಕೀಯಕ್ಕೆ ಚಕ್ರವ್ಯೂಹ
ವಿಶ್ಲೇಷಣೆಗೆ ವಿಶೇಷವಂತೆ
ತಾಜಾ ಸುದ್ದಿಯ ಬೃಹತ್ ಸಂತೆ

ಸ್ತ್ರೀಯರ ವೇದಿಕೆ ಲೇಡಿಸ್ ಕ್ಲಬ್ಬು
ಜಾತಕ ತಿಳಿಯಲು ತಾರಾಬಲ
ಸ್ಯಾಂದ್ಲುಡ್ ಸುದ್ದಿಗೆ ಫಿಲ್ಮಿ ಫಂಡಾ
ಜೀವನ ಕಲೆಗೆ ಬಿಂದಾಸ್ ಬೆಂಗ್ಳೂರ್

ಕ್ರೀಡಾ ಪ್ರಿಯರಿಗೆ ಬೌಂಡರಿ ಲೈನು
ವಿವಿಧ ಅಭಿರುಚಿಯ ಟಿ ವಿ ನೈನು
ನಿತ್ಯ ಬಿತ್ತರ ವಾರೆಂಟೆ , ವಾರಕೊಮ್ಮೆ ಹೀಗೂ ಉಂಟೆ
ಒಂದೇ ಎರಡೇ ಹಲವು ಬಗೆ, ತಣಿಸುತ್ತಿವೆ ವೀಕ್ಷಕರ ದಗೆ


(ಟಿವಿ ೯ ವಾಹಿನಿಗೆ ನಾನು ಕೆಲಸಕ್ಕೆ ಸೇರಿದ ಹೊಸದರಲ್ಲಿ ಮೊದಲನೇ ವಾರ್ಷಿಕೊತ್ಸವಕ್ಕಾಗಿ ದಿನಾಂಕ ೯/೧೨/೨೦೦೭ ರಂದು ಬರೆದ ಕವನ. )


Thursday, February 25, 2010

Khan malleshwara vachana

ತಂದೆ ಧನಿಕನಾಡೋಡೇನು ? ಮಗ ಮಾನಸಿಕ ಅಸ್ವಸ್ಥನಾದಡೆ ;


ತಾಯಿ ಸಂಗೀತಗಾರ್ತಿಯಾದೊಡೇನು ? ಮಗಳು ಮೂಗಿಯಾದಡೆ ;


ಗುರುವು ಜ್ಞಾನಿಯಾದೊಡೇನು ? ಶಿಷ್ಯ ಮೂರ್ಖನಾದಡೆ ;


ನೀನು ವಿಶ್ವ ರೂಪನಾದೊಡೇನು ? ನಿನ್ನ ನಿಜದ ನಿಲುವ


ನಾನರಿಯದಿದ್ದಡೆ, ಮಿಕ್ಕುದೆಲ್ಲವು ವ್ಯರ್ಥ ನೋಡ ಕಾನ್ ಮಲ್ಲೇಶ್ವರ


Khan malleshwara vachana

ಲಿಂಗವೇ ತಂದೆ, ಲಿಂಗವೇ ತಾಯಿ


ಲಿಂಗವೇ ಬಂಧು, ಲಿಂಗವೇ ಬಳಗ


ಲಿಂಗವೆಂಬುದು ನನ್ನೊಂದು ಅಂಗವಾಗಿದೆ


ಇಷ್ಟಲಿಂಗವಿಲ್ಲದಿರೆ ನಾ ಅಂಗವಿಕಲ!


ಇದು ಕಾರಣ ನಿನ್ನ ಬಿಟ್ಟರೂ ನಿನ್ನ ಕುರುಹು


ಲಿಂಗವ ಬಿಡೆನಯ್ಯ ಕಾನ್ ಮಲ್ಲೇಶ್ವರ

Friday, January 1, 2010

ರಾಮಚಂದ್ರಪುರ ಮಠ : Ramachandrapura mata Raghaveshwra swamiji

ಶ್ರೀ ರಾಘವೇಶ್ವರ ಭಾರತಿ
ಗೋಕುಲ ರಕ್ಷಣ ಸಾರತಿ
ದೇಶದೆಲ್ಲೆಡೆ ಕೀರುತಿ
ಬೆಳಗಿರೆಲ್ಲರು ಆರತಿ !!

ಆನೆ ದಂತದ ಸಿಂಹಾಸನ
ಜಗದ ಅದ್ಭುತ ದರ್ಶನ
ನಡೆದ ಮಹಾ ರಾಮಾಯಣ
ಮರೆಯಲಾಗದ ಆ ಕ್ಷಣ

ಕೊಡಚಾದ್ರಿ ನಡುವೆಯ ಕಾನನ
ಅದರ ನಡುವೆ ಶ್ರೀರಾಮನ
ಜೊತೆಗೆ ವಿಘ್ನ ವಿನಾಶನ
ನಮಿಸಿರಿ ಚಂದ್ರಮೌಳೇಶನ !!

ವಿವಿಧ ತಳಿಯ ಗೋವುಗಳು
ಆಶ್ರಯವ ಪಡೆದ ತಾಣವು
ಕಲಿಯುಗದ ನಂದಗೋಕುಲ
ಇಲ್ಲಿರುವ ಬೃಹತ್ ಗೋಶಾಲ !!

ಧರ್ಮಸ್ಥಳದ ಬಾಹುಬಲಿ ಮಜ್ಜನ : Dharmastala baubali gommateshwara mastakabisheka

ಧರ್ಮಸ್ಥಳದ ಬಾಹುಬಲಿ
ನೆಲೆಸಿಹೆ ರತ್ನಗಿರಿಯಲ್ಲಿ
ಕಂಗೊಳಿಸುತ್ತಿರವೆ ಬಿಸಿಲಲ್ಲಿ
ಕಾಯುತ್ತಿರುವೆ ನೀ ಏನಿಲ್ಲಿ ? !!

ಬರುವ ಭಕ್ತರ ಹರಸುತಲಿ
ಭವ ಬಂಧನವನು ನೀಗುತಲಿ
ಅಹಿಂಸೆ ತತ್ವವ ಸಾರುತಲಿ
ಸಾಗಿದೆ ಸತ್ಯದ ರಥವಿಲ್ಲಿ !!

ಮಸ್ತಕಾಭಿಷೇಕದ ಸಡಗರದಿ
ಸಜ್ಜುಗೊಂಡಿಹೆ ನಗು ಮೊಗದಿ
ಮೂರನೇ ಮಜ್ಜನ ವಿರಾಗಿಗೆ
ವಿರಾಟ್ ರೂಪದ ವಿಶ್ವನಿಗೆ !!

ಹೆಗ್ಗಡೆಯವರ ಸಮ್ಮುಖದಿ
ವರ್ಧಮಾನರ ನೇತೃತ್ವದಿ
ನಡೆಯುವ ಮಹಾ ಮಜ್ಜನದಿ
ಪಾಲ್ಗೊಂಡವರಿಗೆ ಪುಣ್ಯ ನಿಧಿ !!

ತರುಣ ಸಾಗರ ಜೈನಮುನಿ : Tarunasagara jainamuni

ತರುಣ ಸಾಗರ ಮುನಿವರ


ಕಟು ಪ್ರವಚನದ ಸಾಗರ


ಅಹಿಂಸಾ ತತ್ವದ ಆಗರ


ಪಾಲಿಸು ಎಲ್ಲರ ಅನವರ !!


ನೀಡುವಿರೆಲ್ಲೆಡೆ ಪ್ರವಚನ


ಗೆದ್ದಿರಿ ರಾಜ್ಯದ ಜನಮನ


ಕಾಲ್ನಡಿಗೆಯಲ್ಲೇ ನಿಮ್ಮ ಪಯಣ


ನಿರ್ವಾಣ ಮೂರ್ತಿ ನಿಜಶರಣ !!


ಕೇಳಿದರೊಮ್ಮೆ ನಿಮ್ಮ ನುಡಿ


ಕಳಚಿ ಹೋಗುವುದು ಗೊಡ್ಡು ಮಡಿ


ದುಶ್ಚಟಗಳನ್ನು ಮಾಯ ಮಾಡಿ


ಶರಣಾಗುವನು ನಿಮಗೆ ನಡೆದಾಡುವ ಗುಡಿ !!


ದಿಗಂಬರ ರೂಪದ ಧೀನಬಂಧು


ಆದರು ಕರೆವರು ಮಹಾರಾಜ ಎಂದು


ಮಾನವ ರೂಪದ ಮಹಾನ್ ಚೇತನ


ನಿಮಗಿದೋ ನನ್ನ ನುಡಿನಮನ !!