ಮನುಷ್ಯನ ಬದುಕು ಕೇವಲ ಯಾಂತ್ರಿಕವಾಗುತ್ತಿರುವ ಇಂದಿನ ದಿನಗಳಲ್ಲಿ ಅದರಲ್ಲೂ ಮಹಾನಗರಗಳಲ್ಲಿನ ಬದುಕು ಪರಸ್ಪರ ನಂಬಿಕೆ ವಿಶ್ವಾಸಗಳನ್ನೇ ಕಳೆದುಕೊಳ್ಳುತ್ತಿರುವ ನಡುವೆ ಆಗಾಗ ನಡೆಯುವ ಭಯೋತ್ಪಾದನೆಯ ಚಟುವಟಿಕೆಗಳು ಅಷ್ಟಿಷ್ಟು ಉಳಿದಿರುವ ನಂಬಿಕೆಯನ್ನೇ ಕೊಲ್ಲುತ್ತಿದೆ. ಯಾರು ಒಳ್ಳೆಯವರು ? ಯಾರು ಕೆಟ್ಟವರು ಎಂಬುದೇ ತಿಳಿಯದಂತಾಗಿದೆ, ಎಲ್ಲರನ್ನು ಅನುಮಾನದಿಂದಲೇ ನೋಡುವಂತಾಗಿದೆ. ನಮ್ಮ ನಡುವೆಯೇ ಇದ್ದವರು, ನಂಬಲಸಾಧ್ಯವಾದ ವಿಧ್ವಂಸಕ ಕೃತ್ಯಗಳನ್ನು ಮಾಡಲು ಹೊಂಚು ಹಾಕುತ್ತಿದ್ದಾರೆಂಬ ಆತಂಕದ ವಿಷಯಗಳು ಹೊರಬಿದ್ದಾಗಲಂತೂ ಮತ್ತಷ್ಟು ಭಯವಾಗದಿರದು . ಉಗ್ರವಾದ ವೆಂಬುದು ಈ ದೇಶದಲ್ಲಿ ಹೆಚುತ್ತಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಅದನ್ನು ಹತ್ತಿಕ್ಕ ಬೇಕಾದ ಆದಳಿತರೂದರು ಎಲ್ಲ ವಿಷಯಗಳಂತೆ ಇದನ್ನು ಸಹ ರಾಜಕೀಯಗೊಲಿಸುತ್ತಿರುವುದೇ ಉಗ್ರವಾದ ದಿನೇ ದಿನೇ ಹೆಚ್ಚಾಗಲು ಮತ್ತು ಉಗ್ರರ ದಾಳಿಗಳ ಭೀಕರತೆಯು ಹೆಚ್ಚಾಗಲು ಕಾರಣ. ಇದಕ್ಕೆ ತಾಜಾ(ಜ್) ನಿದರ್ಶನವೆ ಮುಂಬೈನಲ್ಲಿ ನಡೆದ ಭೀಕರ ದಾಳಿ ದೇಶದ ಕರಾಳ ಮತ್ತು ರಕ್ತ ಸಿಕ್ತ ಇತಿಹಾಸದಲ್ಲಿ ಮುಂಬೈ ಪ್ರಕರಣದಷ್ಟು ದೊಡ್ಡ ದುರಂತ ಕತೆ ಸಿಕ್ಕಲಾರದು ? ಹೌದು ದೇಶದ ವಾಣಿಜ್ಯ ರಾಜಧಾನಿ ಎಂದೇ ಕರೆಯಿಸಿಕೊಳ್ಳುವ ಮುಂಬೈ ಮಹಾನಗರಿ ಸತತ ೬೦ ಗಂಟೆಗಳ ಉಗ್ರರ ರುದ್ರ ನರ್ತನಕ್ಕೆ ನಲುಗಿದ್ದು ಮಾತ್ರವಲ್ಲ ತನ್ನ ಸಂಪೂರ್ಣ ದೈನಂದಿನ ಕೆಲಸ ಕಾರ್ಯಗಳನ್ನೇ ಮರೆತು ನಿರಂತರ ಟಿವಿ ಚಾನೆಲ್ ಗಳ ಮುಂದೆಯೇ ಕಳೆಯಿತೆನ್ದರು ತಪ್ಪಾಗಲಿಕ್ಕಿಲ್ಲ. ಕೇವಲ ಮುಂಬೈ ನಗರಿಯನ್ನಷ್ಟೇ ಅಲ್ಲದೆ ಇಡಿ ದೇಶವನ್ನೇ ಬೆಚ್ಚಿ ಬಿಳಿಸಿದ ಪ್ರಕರಣವನ್ನು ಯಾವುದೇ ಪದಗಳಿಂದ ಬಣ್ಣಿಸಿದರೂ ಅದರ ಭೀಕರತೆ ಹಾಗು ಅದರ ಕರಾಳ ಕಾರ್ಮೋಡವನ್ನು ಕಣ್ಣಿಗೆ ಕಟ್ಟಿ ಕೊಡುವುದು ಕಷ್ಟ, ಆದರೆ ಆ ದೃಶ್ಯಗಳನ್ನು ಟಿವಿ ಪರದೆಯ ಮೇಲೆ ತಮ್ಮ ತಮ್ಮ ಮನೆಗಳಲ್ಲಿ ನೋಡಿದ ಆ ಭಯಾನಕ ಕ್ಷಣಗಳನ್ನು ಮರೆಯುವುದಕ್ಕೆ ಮಾತ್ರ ಸುಲಭವಾಗಿ ಸಾಧ್ಯವಿಲ್ಲ.ಕಾರಳತೆಯ ಕಾರ್ಮೋಡದಲ್ಲಿ ಕರಕಲಾಗಿ ಹೋದ ಅದೆಷ್ಟೋ ಮಂದಿ ಅಮಾಯಕರ ಆಕ್ರಂದನ ಮತ್ತು ನಿರಂತರ ೫೦ ಗಂಟೆಗೂ ಹೆಚ್ಚು ಕಾಲ ಮೊಳಗಿದ ಗುಂಡಿನ ಶಬ್ದ ಅಲ್ಲ್ಲಿನ ಜನತೆಯ ಕಿವಿಯಿಂದ ಹೊರಹೋಗಲು ಇನ್ನೆಷ್ಟು ಕಾಲ ಬೇಕೋ ? ನಗರದ ಹತ್ತಕ್ಕೂ ಹೆಚ್ಹು ಕಡೆಯಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಅಮಾಯಕರ ರಕ್ತದ ಕಲೆ ಕಾಣೆಯಾಗಲು ಮುಂದಿನ ವರ್ಷದ ಮಳೆಗಾಲವೇ ಬರಬೇಕೇನೋ ? ಒಟ್ಟಾರೆ ದೇಶವನ್ನು ಬೆಚ್ಚು ಬೀಳಿಸಿದ ಮುಂಬೈ ಸ್ಪೋಟದಂತಹ ಪ್ರಕರಣಗಳು ಭವಿಷ್ಯದ ದಿನಗಳಲ್ಲಿ ಇನ್ನೆಂದು ನಡೆಯದಿರಲಿ. ಇದಕ್ಕೆ ಮುಖ್ಯವಾಗಿ ಬೇಕಾಗಿರುವುದು ರಾಜಕೀಯ ಇಚ್ಚಾಶಕ್ತಿ. ನಮ್ಮ ದೇಶದಲ್ಲಿ ರಾಜಕೀಯ ಇಚ್ಚಾಶಕ್ತಿಯ ಕೊರತೆಯಿಂದಲೇ ಹಲವು ಅವಘಡಗಳು ಸಂಭವಿಸುತ್ತಲಿವೆ. ಕೇವಲ ಇಂತಹ ಪ್ರಕರಣಗಳು ನಡೆದಾಗ ಯಾವುದೊ ಓರ್ವ ಮಂತ್ರಿಯೋ, ಅಧಿಕಾರಿಯ ರಾಜಿನಾಮೆಯಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಬದಲಿಗೆ ಪಕ್ಷಾತೀತವಾಗಿ ದೇಶದ ಹಿತ ಕಾಪಾಡಲು ಕಂಕಣ ಬದ್ದರಾಗಬೇಕು. ಇನ್ನಾದರೂ ಮುಗ್ದರ ಮಾರಣ ಹೋಮ ನಿಲ್ಲಲಿ ನಿಷ್ಠ ಅಧಿಕಾರಿಗಳ ಬಲಿಯಾಗದಿರಲಿ ಭಯೋತ್ಪಾದನೆಯ ವಿರುದ್ದ ಜಾಗತಿಕ ಸಮರ ನಡೆಯಲಿ ಎಂದು ಹಾರೈಸೋಣ.ಮುಂಬೈ ದುರಂತದಲ್ಲಿ ಮಡಿದ ನೂರಾರು ಮುಗ್ಧರ ಆತ್ಮಕ್ಕೆ ಶಾಂತಿ ದೊರೆಯಲಿ, ವೀರ ಮರಣವನ್ನ್ನಪ್ಪಿದ ಭಾರತಾಂಬೆಯ ಹೆಮ್ಮೆಯ ಮಕ್ಕಳಾದ ಸೇನಾ ಶ್ರೇಷ್ಠರಿಗೆ ಇದೋ ನನ್ನ ಆತ್ಮ ಪೂರ್ವಕ ಸೆಲ್ಯೂಟ್
............ ಜೈ ಭಾರತ್ ಮಾತಾ
Subscribe and Stay UptoDate
Sunday, November 30, 2008
Subscribe to:
Post Comments (Atom)
No comments:
Post a Comment