Subscribe and Stay UptoDate

Enter your email address:

Delivered by Subscribe and stay upto date

Wednesday, December 31, 2008

Happy new year - ಹೊಸ ವರ್ಷದ ಶುಭಾಶಯಗಳು

ಚೆನ್ನುಡಿ
ಬರುತ್ತಲೇ ಇದೆ ಹೊಸ ವರ್ಷ , ಬದಲಾಗಲಿಲ್ಲ ಮನುಷ್ಯ
ಹೊಸವರುಷದಿ ನೀಗಲಿ ಬಡವರ ಹಸಿವು,
ಇನ್ನಾದರೂ ಹೆಚ್ಚಲಿ ಎಲ್ಲೆಡೆ ಹಸಿರು
ಮರೆಯಾಗಲಿ ದ್ವೇಷ, ಕೊನೆಯಾಗಲಿ ವೈಷಮ್ಯ
ನಿನ್ನನೆಲ್ಲ ನಮಿಸುವಂತೆ ಕರುಣಿಸೋ ಕಾನ್ ಮಲ್ಲೇಶ

Thursday, December 18, 2008

ವ್ಯಕ್ತಿತ್ವ ವಿಕಸನ ವಾಕ್ಯಗಳು _Personality development sentences

ತಾತ್ಕಾಲಿಕ ಸಂತೋಷಕ್ಕಾಗಿ ಜೀವನದ ಮುಂದಿನ ಸಾಧನೆಗೆ ಸಿದ್ಧರಾಗಬೇಕಾದ ವಿದ್ಯಾರ್ಥಿ ಜೀವನವನ್ನು ವ್ಯರ್ಥ ಮಾಡಿಕೊಳ್ಳದೇ ಉಪಯುಕ್ತ ರೀತಿಯಲ್ಲಿ ಸಮಯವನ್ನು ಬಳಸಿಕೊಳ್ಳಬೇಕು.


ಅಸಾಧ್ಯವೆಂಬುದು ನಮ್ಮ ಆಲಸ್ಯದಿಂದ ಬರುತ್ತದೆಯೇ ಹೊರತು ನಿಜವಾಗಿ ಯಾವುದು ಅಸಾಧ್ಯ ಎಂಬುದಿಲ್ಲ. ಆದ್ದರಿಂದ ನಮ್ಮ ಉತ್ಸಾಹ ಮತ್ತು ಅದಕ್ಕೆ ತಕ್ಕ ಪ್ರಯತ್ನದಿಂದ ಅಸಾಧ್ಯವೆಂಬುದು ಸಾಧ್ಯವಾಗುತ್ತದೆ.

ವಿಧ್ಯಾರ್ಥಿಗಳ ಜೀವನದಲ್ಲಿ ಪೋಷಕರಷ್ಟೇ ಜವಾಬ್ದಾರಿ ಇರುವ ಮತ್ತೊಂದು ಪಾತ್ರವೆಂದರೆ ಶಿಕ್ಷಕರು. ಆದ್ದರಿಂದ ಕೇವಲ ಸರ್ಕಾರಿ ಶಾಲೆಯಲ್ಲಿ ಸಂಬಳಕ್ಕಾಗಿ ದುಡಿಯದೆ ನಿಮ್ಮ ಕೈಯಲ್ಲಿ ಈ ರಾಷ್ಟ್ರದ ಉತ್ತಮ ಪ್ರಜೆಗಳನ್ನು ತಯಾರಿಸುವ ಶಕ್ತಿ ಇದೆ ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ಕರ್ತವ್ಯ ನಿರ್ವಹಿಸಬೇಕು.

ನಾವು ಕಳೆಯುವ ಕಾಲವು ನಮ್ಮ ಬದುಕಿನಲ್ಲಿ ಮತ್ತೆಂದೂ ಸಿಗದ ವಸ್ತುವಾಗಿದ್ದರಿಂದ ಅದನ್ನು ಕ್ಷಣ ಕ್ಷಣವೂ ಅಮೂಲ್ಯವೆಂದು ಮನಸಿನಲ್ಲಿಟ್ಟುಕೊಂಡು ಸಮಯ ಕಳೆಯಬೇಕು.

ನಮ್ಮನ್ನು ಯಾವ ವಿಷಯದಲ್ಲಿ ನಾವು ತೊಡಗಿಸಿಕೊಳ್ಳುತ್ತೆವೆಯೋ ಆ ವಿಷಯದ ಮೌಲ್ಯಕ್ಕನುಸಾರವಾಗಿ ನಮ್ಮ ಫಲಿತಾಂಶ ದೊರಕುತ್ತದೆ. ಈ ಹಿನ್ನಲೆಯಲ್ಲಿ ಮಳೆ ಹನಿಯ ಭವಿಷ್ಯ ಅದು ಬೀಳುವ ಸ್ಥಳವನ್ನು ಆಧರಿಸಿರುತ್ತದೆ ಎಂಬ ಸಂಸ್ಕೃತ ಸುಭಾಷಿತದ ಉದಾಹರಣೆ ಅರ್ಥಗರ್ಭಿತವಾದದ್ದು.

ಕೇವಲ ವಿಧ್ಯಾವಂತನಾಗಿದ್ದರೆ ಸಾಲದು ಜೊತೆಗೆ ವಿಧ್ಯೆಗೆ ತಕ್ಕ ವಿವೇಕವನ್ನು ಹೊಂದಿದ್ದಾರೆ ಮಾತ್ರ ಆ ವಿಧ್ಯೆಗೆ ಸೂಕ್ತ ಗೌರವ ಸಲ್ಲುತ್ತದೆ.

Tuesday, December 9, 2008

ರಾಜಕೀಯ ಕುಟುಕು - Political Criticize

ಕರ್ನಾಟಕ ರಾಜ್ಯದ ರಾಜಕಾರಣ

ತಲೆ ಕೆಳಗಾಗಲು ಯಾರು ಕಾರಣ ?

20 - 20 ರ ಒಪ್ಪಂದ

ಯಾಕೆ ಬಿತ್ತು ರಪ್ಪಂಥ ?

ಅಧಿಕಾರ ಹಿಡಿಯುವಾಗ ಅಪ್ಪನೇ ವಿರೋಧಿ

ಅಧಿಕಾರ ಕೊಡುವಾಗ ವರಿಷ್ಟರದ್ದೇ ಸರಧಿ

ಎಲ್ಲ ಮುಗಿದ ಮೇಲೆ ಕಣ್ಣೀರ ಕೋಡಿ

ಶಾಸಕರ ಮುಖಗಳು ಬಾಡಿ ಹೋಯ್ತು ನೋಡಿ

ಕುಮಾರಣ್ಣನಿಗೆ ಏನೂ ಇಲ್ಲ ಕಾರುಬಾರು

ಈಗ ಏನಿದ್ದರೂ ರಾಜ್ಯಪಾಲರದ್ದೇ ದರ್ಬಾರು

ಯಡಿಯೂರಣ್ಣನ ಯಾತ್ರೆ ಸುತ್ತುತ್ತಿದೆ ಊರೂರು

ಧರ್ಮಣ್ಣನ ದಂಡು ಸದ್ಯಕ್ಕೆ ಪಾರು

ಜನತೆ ಯಾರಿಗೆ ನೀಡುವರೋ ಕೆಂಪು ಗೂಟದ ಕಾರು ?

(ಅಧಿಕಾರ ಹಸ್ತಾಂತರ ವಿವಾದದ ಸಂದರ್ಭದಲ್ಲಿ ಬರೆದ ಕವನ {ಕುಮಾರಸ್ವಾಮಿಯವರಿಗೆ ನೇರವಾಗಿ ಕೊಟ್ಟು ಮುಜುಗರಕ್ಕೆ ಈಡು ಮಾಡಿದ್ದೆ ನವೆಂಬರ್ ೨೦೦೭})

Sunday, December 7, 2008

ಸಂಸಾರ - ಹೆಣ್ಣು _ women roll in family

ಕನಸು ಕಾಣುವ ಯುವತಿಯರೆ
ಚಂಚಲ ಮನಸಿನ ನಲ್ಲೆಯರೆ
ಕೇಳಿರಿ ಒಂದು ನುಡಿಮುತ್ತು
ಪಾಲಿಸಿ ಇದನು ಕೆಲ ಹೊತ್ತು

ಹೆಣ್ಣಿಗೆ ಇರಬೇಕು ಬಲು ತಾಳ್ಮೆ
ಇಲ್ಲದಿರೆ ಜೀವನ ಬಲು ರಗಳೆ
ಸಾಕಷ್ಟು ಕಮ್ಮಿ ಮಾಡಿ ಕೋಪವನ್ನು
ಇಲ್ಲದಿದ್ದರೆ ಅನುಭವಿಸಿ ಶಾಪವನು

ಗಂಡನ ಹೃದಯ ಬಲು ಒರಟು
ಪ್ರೀತಿಯಿಂದ ಗೆಲ್ಲಬೇಕು ಅವನ ಮನಸು
ಕಷ್ಟ ಸುಖಃ ಇಬ್ಬರಿಗೂ ಸಮಪಾಲು
ಸಂಸಾರ ಎಂದರೆ ಜೇನು ಗೂಡು

ಮದುವೆಯ ಮೊದಲು ಉತ್ಸಾಹ
ನಂತರ ಬಹಳ ತಾತ್ಸಾರ
ಮೊದಲಿನಂತೆ ಇರಬೇಕು ಕೊನೆತನಕ
ಮೆಲುಕು ಹಾಕಬೇಕು ಸವಿನೆನಪ

ಹೆಣ್ಣಿಗೆ ಆಸ್ತಿಯ ಆಸೆ ಬಹಳ
ದುಡಿಯುವ ಗಂಡಸಿಗೆ ಕೋಪ
ಬಹಳ ಇಬ್ಬರ ಮನಸು ಒಂದಾಗಿ
ಸಾಗಬೇಕು ಸಂಸಾರ ಚಂದಾಗಿ

( ಕಳೆದ ನಾಲ್ಕು ವರ್ಷದ ಹಿಂದೆ ಹಿರಿಯ ಸ್ನೇಹಿತರಾದ ಫಾರೆಸ್ಟ್ ಆಫೀಸರ್ ಹೆಚ್ ಎಲ್ ರಾಮಯ್ಯ ನವರ ಕೋರಿಕೆ ಮೇರೆಗೆ 2004 ರಲ್ಲಿ ಬರೆದ ಕವನ )

Saturday, December 6, 2008

ಕವನ : ಗಾಂಧಿ ಇದ್ದಿದ್ದರೆ ... Poem - Gandhiji

ಸ್ವಾತಂತ್ರ್ಯ ತಂದು ಕೊಟ್ಟವರು ಗಾಂಧಿ
ಅವರ ತತ್ವವನ್ನೇ ಮರೆತಿಹರು ಇಂದಿನ ಮಂದಿ
ಸರ್ಕಾರಿ ಕಛೇರಿಗಳಲ್ಲಿರುವುದು ಕೇವಲ ಗಾಂಧೀಜಿ ಭಾವಚಿತ್ರ
ಸದ್ಯ ಗಾಂಧಿ ಇದ್ದಿದ್ದರೆ ಕಿತ್ತು ಎಸೆಯುತ್ತಿದ್ದರು, ಭ್ರಷ್ಟ ಸ್ಥಳದಲ್ಲಿ ಬೇಡವೆಂದು ತಮ್ಮ ಚಿತ್ರ

ವೇದಿಕೆ ಮೇಲೆ ಹೇಳುವರು ಗಾಂಧಿ ತತ್ವ
ಮನೆಗೆ ಬಂದ ಮೇಲೆ ಹೇಳಿದ್ದು ಹೋಯಿತು ಎತ್ತ ?
ಪೊಳ್ಳು ಮಾತಿನಲ್ಲಿ ಪ್ರಚಾರ ಪಡೆಯುವ ನಾಯಕರ ಕಂಡು
ಗಾಂಧಿ ಇದ್ದಿದ್ದರೆ ವೇದಿಕೆಯಿಂದ ಎಳೆದು ದೂದುತ್ತಿದ್ದರು ಇಂದು ..

ಕವನ : ಸೊಳ್ಳೆ _ poem - Mosquito

ಎಷ್ಟು ರಕ್ತ ಹೀರಿದಿ ನೀನು ಏಯ್ ಕಳ್ಳ ಸೊಳ್ಳಿ
ಕದ್ದು ಕುಂತು ರಕ್ತವ ಹೀರಿ ಬೆಳೆಸಿದಿ ಕುಲಬಳ್ಳಿ
ಪ್ಯಾಟಿ ಮಂದಿ ಮಾಡ್ಯಾರ ನಿನಗೆ ತಕ್ಕದಾದ ಶಾಸ್ತಿ
ಹಳ್ಳಿ ಮಂದಿಗೆ ತಿಳಿಯಲ್ಲಂತ ರಕ್ತವ ಹೀರ್ತಿ

Monday, December 1, 2008

ವಚನಾರ್ಪಣೆ 2 - Khan malleshwara vachana

ಭಾವನೆ ಇಲ್ಲದೆ ಪದ್ಯ ಬರೆಯುವುದು
ಭಾವನೇ ಇಲ್ಲದೆ ಮಾವನಾಗುವುದು
ಕಾಮ ಸೂತ್ರವೆಂದು ಶೀರ್ಷಿಕೆಯಿಟ್ಟು
ಖಾವಿಧಾರಿ ಬರೆದ ಕಾವ್ಯದಂತಾದೀತು
ನೋಡಾ ಕಾನ್ ಮಲ್ಲೇಶ್ವರ

ವಚನಾರ್ಪಣೆ 1 Khan malleshwara vachana

ಕಾಲಕ್ಕೆ ಬೇಲಿ ಹಾಕುವರುಂಟೆ ?
ಕಳೆಯುತ್ತಿವೆ ಕ್ಷಣಗಳು, ಉರುಳುತ್ತಿವೆ ದಿನಗಳು
ಕಳೆದ ಕ್ಷಣ ಮತ್ತೆ ಸಿಕ್ಕದು, ಬೆಳೆದ ಬೆಳೆ ಬಿಡಲು ಬಾರದು
ಇದು ಕಾರಣ ಮುತ್ತಿಗಿಂತ ಹೊತ್ತು ಲೇಸೆಂದ ಕಾನ್ ಮಲ್ಲೇಶ್ವರ

Sunday, November 30, 2008

ಮುಂಬೈ ದುರಂತ : ಕರಾಳತೆಯ ಕಾರ್ಮೋಡ - mumbai blast 26/11 black day

ಮನುಷ್ಯನ ಬದುಕು ಕೇವಲ ಯಾಂತ್ರಿಕವಾಗುತ್ತಿರುವ ಇಂದಿನ ದಿನಗಳಲ್ಲಿ ಅದರಲ್ಲೂ ಮಹಾನಗರಗಳಲ್ಲಿನ ಬದುಕು ಪರಸ್ಪರ ನಂಬಿಕೆ ವಿಶ್ವಾಸಗಳನ್ನೇ ಕಳೆದುಕೊಳ್ಳುತ್ತಿರುವ ನಡುವೆ ಆಗಾಗ ನಡೆಯುವ ಭಯೋತ್ಪಾದನೆಯ ಚಟುವಟಿಕೆಗಳು ಅಷ್ಟಿಷ್ಟು ಉಳಿದಿರುವ ನಂಬಿಕೆಯನ್ನೇ ಕೊಲ್ಲುತ್ತಿದೆ. ಯಾರು ಒಳ್ಳೆಯವರು ? ಯಾರು ಕೆಟ್ಟವರು ಎಂಬುದೇ ತಿಳಿಯದಂತಾಗಿದೆ, ಎಲ್ಲರನ್ನು ಅನುಮಾನದಿಂದಲೇ ನೋಡುವಂತಾಗಿದೆ. ನಮ್ಮ ನಡುವೆಯೇ ಇದ್ದವರು, ನಂಬಲಸಾಧ್ಯವಾದ ವಿಧ್ವಂಸಕ ಕೃತ್ಯಗಳನ್ನು ಮಾಡಲು ಹೊಂಚು ಹಾಕುತ್ತಿದ್ದಾರೆಂಬ ಆತಂಕದ ವಿಷಯಗಳು ಹೊರಬಿದ್ದಾಗಲಂತೂ ಮತ್ತಷ್ಟು ಭಯವಾಗದಿರದು . ಉಗ್ರವಾದ ವೆಂಬುದು ಈ ದೇಶದಲ್ಲಿ ಹೆಚುತ್ತಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಅದನ್ನು ಹತ್ತಿಕ್ಕ ಬೇಕಾದ ಆದಳಿತರೂದರು ಎಲ್ಲ ವಿಷಯಗಳಂತೆ ಇದನ್ನು ಸಹ ರಾಜಕೀಯಗೊಲಿಸುತ್ತಿರುವುದೇ ಉಗ್ರವಾದ ದಿನೇ ದಿನೇ ಹೆಚ್ಚಾಗಲು ಮತ್ತು ಉಗ್ರರ ದಾಳಿಗಳ ಭೀಕರತೆಯು ಹೆಚ್ಚಾಗಲು ಕಾರಣ. ಇದಕ್ಕೆ ತಾಜಾ(ಜ್) ನಿದರ್ಶನವೆ ಮುಂಬೈನಲ್ಲಿ ನಡೆದ ಭೀಕರ ದಾಳಿ ದೇಶದ ಕರಾಳ ಮತ್ತು ರಕ್ತ ಸಿಕ್ತ ಇತಿಹಾಸದಲ್ಲಿ ಮುಂಬೈ ಪ್ರಕರಣದಷ್ಟು ದೊಡ್ಡ ದುರಂತ ಕತೆ ಸಿಕ್ಕಲಾರದು ? ಹೌದು ದೇಶದ ವಾಣಿಜ್ಯ ರಾಜಧಾನಿ ಎಂದೇ ಕರೆಯಿಸಿಕೊಳ್ಳುವ ಮುಂಬೈ ಮಹಾನಗರಿ ಸತತ ೬೦ ಗಂಟೆಗಳ ಉಗ್ರರ ರುದ್ರ ನರ್ತನಕ್ಕೆ ನಲುಗಿದ್ದು ಮಾತ್ರವಲ್ಲ ತನ್ನ ಸಂಪೂರ್ಣ ದೈನಂದಿನ ಕೆಲಸ ಕಾರ್ಯಗಳನ್ನೇ ಮರೆತು ನಿರಂತರ ಟಿವಿ ಚಾನೆಲ್ ಗಳ ಮುಂದೆಯೇ ಕಳೆಯಿತೆನ್ದರು ತಪ್ಪಾಗಲಿಕ್ಕಿಲ್ಲ. ಕೇವಲ ಮುಂಬೈ ನಗರಿಯನ್ನಷ್ಟೇ ಅಲ್ಲದೆ ಇಡಿ ದೇಶವನ್ನೇ ಬೆಚ್ಚಿ ಬಿಳಿಸಿದ ಪ್ರಕರಣವನ್ನು ಯಾವುದೇ ಪದಗಳಿಂದ ಬಣ್ಣಿಸಿದರೂ ಅದರ ಭೀಕರತೆ ಹಾಗು ಅದರ ಕರಾಳ ಕಾರ್ಮೋಡವನ್ನು ಕಣ್ಣಿಗೆ ಕಟ್ಟಿ ಕೊಡುವುದು ಕಷ್ಟ, ಆದರೆ ಆ ದೃಶ್ಯಗಳನ್ನು ಟಿವಿ ಪರದೆಯ ಮೇಲೆ ತಮ್ಮ ತಮ್ಮ ಮನೆಗಳಲ್ಲಿ ನೋಡಿದ ಆ ಭಯಾನಕ ಕ್ಷಣಗಳನ್ನು ಮರೆಯುವುದಕ್ಕೆ ಮಾತ್ರ ಸುಲಭವಾಗಿ ಸಾಧ್ಯವಿಲ್ಲ.ಕಾರಳತೆಯ ಕಾರ್ಮೋಡದಲ್ಲಿ ಕರಕಲಾಗಿ ಹೋದ ಅದೆಷ್ಟೋ ಮಂದಿ ಅಮಾಯಕರ ಆಕ್ರಂದನ ಮತ್ತು ನಿರಂತರ ೫೦ ಗಂಟೆಗೂ ಹೆಚ್ಚು ಕಾಲ ಮೊಳಗಿದ ಗುಂಡಿನ ಶಬ್ದ ಅಲ್ಲ್ಲಿನ ಜನತೆಯ ಕಿವಿಯಿಂದ ಹೊರಹೋಗಲು ಇನ್ನೆಷ್ಟು ಕಾಲ ಬೇಕೋ ? ನಗರದ ಹತ್ತಕ್ಕೂ ಹೆಚ್ಹು ಕಡೆಯಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಅಮಾಯಕರ ರಕ್ತದ ಕಲೆ ಕಾಣೆಯಾಗಲು ಮುಂದಿನ ವರ್ಷದ ಮಳೆಗಾಲವೇ ಬರಬೇಕೇನೋ ? ಒಟ್ಟಾರೆ ದೇಶವನ್ನು ಬೆಚ್ಚು ಬೀಳಿಸಿದ ಮುಂಬೈ ಸ್ಪೋಟದಂತಹ ಪ್ರಕರಣಗಳು ಭವಿಷ್ಯದ ದಿನಗಳಲ್ಲಿ ಇನ್ನೆಂದು ನಡೆಯದಿರಲಿ. ಇದಕ್ಕೆ ಮುಖ್ಯವಾಗಿ ಬೇಕಾಗಿರುವುದು ರಾಜಕೀಯ ಇಚ್ಚಾಶಕ್ತಿ. ನಮ್ಮ ದೇಶದಲ್ಲಿ ರಾಜಕೀಯ ಇಚ್ಚಾಶಕ್ತಿಯ ಕೊರತೆಯಿಂದಲೇ ಹಲವು ಅವಘಡಗಳು ಸಂಭವಿಸುತ್ತಲಿವೆ. ಕೇವಲ ಇಂತಹ ಪ್ರಕರಣಗಳು ನಡೆದಾಗ ಯಾವುದೊ ಓರ್ವ ಮಂತ್ರಿಯೋ, ಅಧಿಕಾರಿಯ ರಾಜಿನಾಮೆಯಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಬದಲಿಗೆ ಪಕ್ಷಾತೀತವಾಗಿ ದೇಶದ ಹಿತ ಕಾಪಾಡಲು ಕಂಕಣ ಬದ್ದರಾಗಬೇಕು. ಇನ್ನಾದರೂ ಮುಗ್ದರ ಮಾರಣ ಹೋಮ ನಿಲ್ಲಲಿ ನಿಷ್ಠ ಅಧಿಕಾರಿಗಳ ಬಲಿಯಾಗದಿರಲಿ ಭಯೋತ್ಪಾದನೆಯ ವಿರುದ್ದ ಜಾಗತಿಕ ಸಮರ ನಡೆಯಲಿ ಎಂದು ಹಾರೈಸೋಣ.ಮುಂಬೈ ದುರಂತದಲ್ಲಿ ಮಡಿದ ನೂರಾರು ಮುಗ್ಧರ ಆತ್ಮಕ್ಕೆ ಶಾಂತಿ ದೊರೆಯಲಿ, ವೀರ ಮರಣವನ್ನ್ನಪ್ಪಿದ ಭಾರತಾಂಬೆಯ ಹೆಮ್ಮೆಯ ಮಕ್ಕಳಾದ ಸೇನಾ ಶ್ರೇಷ್ಠರಿಗೆ ಇದೋ ನನ್ನ ಆತ್ಮ ಪೂರ್ವಕ ಸೆಲ್ಯೂಟ್
............ ಜೈ ಭಾರತ್ ಮಾತಾ

Friday, November 28, 2008

ವಚನ ಕುಸುಮ 1 - Khan malleshwara vachana

ದೋಣಿ ನಡೆಸುವ ಪರಿ ಅಂಬಿಗನಲ್ಲಿದೆ ಹುಟ್ಟೇನು ಬಲ್ಲದು ?
ಬುಗುರಿ ತಿರುಗಿಸುವ ಪರಿ ಸೂತ್ರದಾರನಲ್ಲಿದೆ ಚಾಟಿ ಏನು ಬಲ್ಲದು ?
ವಚನ ರಚನೆಯ ಪರಿ ಎನ್ನೊಡೆಯ ನೀನಲ್ಲದೆ ನಾನೇನು ಬಲ್ಲೆನಯ್ಯ
ಕಾನ್ ಮಲ್ಲೇಶ್ವರ