Subscribe and Stay UptoDate

Enter your email address:

Delivered by Subscribe and stay upto date

Sunday, October 31, 2010

ವಚನಾರ್ಪಣೆ : Khan malleshwara vachana

ಹರಿತ ಹಲ್ಲುಗಳ ನಡುವೆ ನಾಲಗೆ ಬದುಕುತ್ತಿಲ್ಲವೇ ?
ರಾಶಿ ಮುಳ್ಳುಗಳ ನಡುವೆ ಹೂವು ಅರಳುತ್ತಿಲ್ಲವೇ ?
ದುಷ್ಟ ಜನರ ನಡುವೆಯೂ ಸತ್ಯವಂತ ಬದುಕಲು ಸಾದ್ಯ
ಕಷ್ಟ ಕೋಟಿ ಬಂದರೂ ನಿಷ್ಠೆಯಿಂದಿರಲು ಸಾದ್ಯ
ಮರುಳ ಮಲ್ಲೇಶ್ವರ ಇದಕೆ ಛಲ ಬೇಕು ನೋಡ

Sunday, July 4, 2010

ವಚನಾರ್ಪಣೆ : Khan malleshwara vachana

ನೆರೆ ಮನೆಯ ಹಿರಿಯರ ಕಂಡರೆ ಎಲ್ಲಿಲ್ಲದ ಗೌರವ
ಮನೆಯಲ್ಲಿರುವ ಅಜ್ಜಿ ತಾತನ ಕಂಡರೆ ಇನ್ನಿಲ್ಲದ ತಾತ್ಸಾರ
ಗುಡಿ ಗೋಪುರಕ್ಕೆ ಹೋಗಿ ಅಡ್ಡ ಅಡ್ಡ ಬೀಳುವರು
ಕೊರಳ ಲಿಂಗಕ್ಕೆ ಜಗುಲಿ ಮೇಲಿನ ಗೂಟವೇ ಗತಿ
ಇಂತವರನೇನೆಂದು ಕರೆಯಲಿ ಹೇಳಾ ಮರುಳ ಮಲ್ಲೇಶ್ವರ

Monday, April 26, 2010

ಟಿ ವಿ ೯ ವಾರ್ಷಿಕೋತ್ಸವ : TV9 first year Anniversary

ನಿರಂತರ ಕನ್ನಡ ವಾರ್ತಾ ವಾಹಿನಿ
ಉತ್ತಮ ಸಮಾಜದ ಗಟ್ಟಿ ಧ್ವನಿ
ಆಚರಿಸುತ್ತಿದೆ ಪ್ರಥಮ ಜಯಂತಿ
ಗಳಿಸಿದೆ ಜನರ ಶಾಶ್ವತ ಪ್ರೀತಿ.

ಒಂದೇ ವರ್ಷದ ಅಲ್ಪ ಅವಧಿ
ಮಾಧ್ಯಮ ಕ್ಷೇತ್ರದಿ ಮಾಡಿದೆ ಕ್ರಾಂತಿ
ಭ್ರಷ್ಟರಿಗಂತು ಬಿಡಿಸಿದೆ ಬ್ರಾಂತಿ
ನೊಂದ ಜನರಿಗೆ ಕೊಡಿಸಿದೆ ಶಾಂತಿ

ಚಿತ್ರ ತಾರೆಯರ ಸಖತ್ ಮಾತು
ರಾಜಕೀಯಕ್ಕೆ ಚಕ್ರವ್ಯೂಹ
ವಿಶ್ಲೇಷಣೆಗೆ ವಿಶೇಷವಂತೆ
ತಾಜಾ ಸುದ್ದಿಯ ಬೃಹತ್ ಸಂತೆ

ಸ್ತ್ರೀಯರ ವೇದಿಕೆ ಲೇಡಿಸ್ ಕ್ಲಬ್ಬು
ಜಾತಕ ತಿಳಿಯಲು ತಾರಾಬಲ
ಸ್ಯಾಂದ್ಲುಡ್ ಸುದ್ದಿಗೆ ಫಿಲ್ಮಿ ಫಂಡಾ
ಜೀವನ ಕಲೆಗೆ ಬಿಂದಾಸ್ ಬೆಂಗ್ಳೂರ್

ಕ್ರೀಡಾ ಪ್ರಿಯರಿಗೆ ಬೌಂಡರಿ ಲೈನು
ವಿವಿಧ ಅಭಿರುಚಿಯ ಟಿ ವಿ ನೈನು
ನಿತ್ಯ ಬಿತ್ತರ ವಾರೆಂಟೆ , ವಾರಕೊಮ್ಮೆ ಹೀಗೂ ಉಂಟೆ
ಒಂದೇ ಎರಡೇ ಹಲವು ಬಗೆ, ತಣಿಸುತ್ತಿವೆ ವೀಕ್ಷಕರ ದಗೆ


(ಟಿವಿ ೯ ವಾಹಿನಿಗೆ ನಾನು ಕೆಲಸಕ್ಕೆ ಸೇರಿದ ಹೊಸದರಲ್ಲಿ ಮೊದಲನೇ ವಾರ್ಷಿಕೊತ್ಸವಕ್ಕಾಗಿ ದಿನಾಂಕ ೯/೧೨/೨೦೦೭ ರಂದು ಬರೆದ ಕವನ. )


Thursday, February 25, 2010

Khan malleshwara vachana

ತಂದೆ ಧನಿಕನಾಡೋಡೇನು ? ಮಗ ಮಾನಸಿಕ ಅಸ್ವಸ್ಥನಾದಡೆ ;


ತಾಯಿ ಸಂಗೀತಗಾರ್ತಿಯಾದೊಡೇನು ? ಮಗಳು ಮೂಗಿಯಾದಡೆ ;


ಗುರುವು ಜ್ಞಾನಿಯಾದೊಡೇನು ? ಶಿಷ್ಯ ಮೂರ್ಖನಾದಡೆ ;


ನೀನು ವಿಶ್ವ ರೂಪನಾದೊಡೇನು ? ನಿನ್ನ ನಿಜದ ನಿಲುವ


ನಾನರಿಯದಿದ್ದಡೆ, ಮಿಕ್ಕುದೆಲ್ಲವು ವ್ಯರ್ಥ ನೋಡ ಕಾನ್ ಮಲ್ಲೇಶ್ವರ


Khan malleshwara vachana

ಲಿಂಗವೇ ತಂದೆ, ಲಿಂಗವೇ ತಾಯಿ


ಲಿಂಗವೇ ಬಂಧು, ಲಿಂಗವೇ ಬಳಗ


ಲಿಂಗವೆಂಬುದು ನನ್ನೊಂದು ಅಂಗವಾಗಿದೆ


ಇಷ್ಟಲಿಂಗವಿಲ್ಲದಿರೆ ನಾ ಅಂಗವಿಕಲ!


ಇದು ಕಾರಣ ನಿನ್ನ ಬಿಟ್ಟರೂ ನಿನ್ನ ಕುರುಹು


ಲಿಂಗವ ಬಿಡೆನಯ್ಯ ಕಾನ್ ಮಲ್ಲೇಶ್ವರ

Friday, January 1, 2010

ರಾಮಚಂದ್ರಪುರ ಮಠ : Ramachandrapura mata Raghaveshwra swamiji

ಶ್ರೀ ರಾಘವೇಶ್ವರ ಭಾರತಿ
ಗೋಕುಲ ರಕ್ಷಣ ಸಾರತಿ
ದೇಶದೆಲ್ಲೆಡೆ ಕೀರುತಿ
ಬೆಳಗಿರೆಲ್ಲರು ಆರತಿ !!

ಆನೆ ದಂತದ ಸಿಂಹಾಸನ
ಜಗದ ಅದ್ಭುತ ದರ್ಶನ
ನಡೆದ ಮಹಾ ರಾಮಾಯಣ
ಮರೆಯಲಾಗದ ಆ ಕ್ಷಣ

ಕೊಡಚಾದ್ರಿ ನಡುವೆಯ ಕಾನನ
ಅದರ ನಡುವೆ ಶ್ರೀರಾಮನ
ಜೊತೆಗೆ ವಿಘ್ನ ವಿನಾಶನ
ನಮಿಸಿರಿ ಚಂದ್ರಮೌಳೇಶನ !!

ವಿವಿಧ ತಳಿಯ ಗೋವುಗಳು
ಆಶ್ರಯವ ಪಡೆದ ತಾಣವು
ಕಲಿಯುಗದ ನಂದಗೋಕುಲ
ಇಲ್ಲಿರುವ ಬೃಹತ್ ಗೋಶಾಲ !!

ಧರ್ಮಸ್ಥಳದ ಬಾಹುಬಲಿ ಮಜ್ಜನ : Dharmastala baubali gommateshwara mastakabisheka

ಧರ್ಮಸ್ಥಳದ ಬಾಹುಬಲಿ
ನೆಲೆಸಿಹೆ ರತ್ನಗಿರಿಯಲ್ಲಿ
ಕಂಗೊಳಿಸುತ್ತಿರವೆ ಬಿಸಿಲಲ್ಲಿ
ಕಾಯುತ್ತಿರುವೆ ನೀ ಏನಿಲ್ಲಿ ? !!

ಬರುವ ಭಕ್ತರ ಹರಸುತಲಿ
ಭವ ಬಂಧನವನು ನೀಗುತಲಿ
ಅಹಿಂಸೆ ತತ್ವವ ಸಾರುತಲಿ
ಸಾಗಿದೆ ಸತ್ಯದ ರಥವಿಲ್ಲಿ !!

ಮಸ್ತಕಾಭಿಷೇಕದ ಸಡಗರದಿ
ಸಜ್ಜುಗೊಂಡಿಹೆ ನಗು ಮೊಗದಿ
ಮೂರನೇ ಮಜ್ಜನ ವಿರಾಗಿಗೆ
ವಿರಾಟ್ ರೂಪದ ವಿಶ್ವನಿಗೆ !!

ಹೆಗ್ಗಡೆಯವರ ಸಮ್ಮುಖದಿ
ವರ್ಧಮಾನರ ನೇತೃತ್ವದಿ
ನಡೆಯುವ ಮಹಾ ಮಜ್ಜನದಿ
ಪಾಲ್ಗೊಂಡವರಿಗೆ ಪುಣ್ಯ ನಿಧಿ !!