Subscribe and Stay UptoDate

Enter your email address:

Delivered by Subscribe and stay upto date

Tuesday, July 21, 2009

ಶರಣ ಕುಕ್ಕಳ್ಳಿ ರೇಣುಕಪ್ಪಗೌಡರ ಕುರಿತ ಗೀತೆ : kukkalli renukappa gowda's song

ಶರಣ ಶ್ರೀ ರೇಣುಕಜ್ಜ ಮರೆಯಾದರು ....

ಮರೆಯಾಗಿ ಮನದಲ್ಲಿ ನೆಲೆಯಾದರು !! ಪಲ್ಲವಿ !!

ಕುಕ್ಕಳ್ಳಿ ಎಂಬ ಚಿಕ್ಕಳ್ಳಿಯಲ್ಲಿ ಹುಟ್ಟಿ ಸೊಕ್ಕು ಮಾಡದ ಸರಳ ಶರಣ ಸಾತ್ವಿಕ !!

ಅಕ್ಕ ತಂಗಿ ಅಣ್ಣ ತಮ್ಮ ರೊಡಗುಡಿ ಬೆಳೆದು, ಭಕ್ತಿ ಭಾವದಿಂದ ಗುರು ಸೇವೆಯಗೈದ !! ಶರಣ !!

ನವ ದಶಕ ಕಳೆದರು ನವ ಚೇತನರಾಗಿ, ನೋವನ್ನುಣ್ಣದೆ ನಡೆದರು ಶೀಘ್ರವೇ !!

ನಾನೇ ಎಂಬುವ ಅಹಂಕಾರವಿಲ್ಲದೆ, ಹಿರಿಕಿರಿಯರೆಲ್ಲರಿಗೂ ಅಣ್ಣಾ ಎನ್ನುತ !! ಶರಣ !!

ಧಕ್ಷ ಧರ್ಮಪತ್ನಿ ಸುಶಿಕ್ಷ ಸಂತಾನ, ಸಂಪೂರ್ಣ ಸಂಸಾರ ಬೆಳೆಸಿದ ಬೇರು !!

ಗೋಚರವಾಗಿ ಇದ್ದರು ಅಂದು ಅಗೋಚರವಾಗಿಯೂ ಇರುವರು ಇಂದು !

ಕಾನ್ ಮಲ್ಲೇಶನ ಕರೆಗೆ ಓ ಎಂದು !! ಶರಣ !!

Wednesday, July 15, 2009

khan malleshwara vachana

ಸುಂದರ ಮನೆಯ ಕಟ್ಟಿ ಬಾಗಿಲನ್ನಿಡದಿದ್ದಡೆ ಫಲವಿಲ್ಲ


ಪದವಿಗಳ ಮೇಲೆ ಪದವಿ ಪಡೆದು ಅದರೊಂದಿಗಿಷ್ಟು


ವಿಧೇಯತೆ ಇಲ್ಲದಿದ್ದಡೆ ಫಲವಿಲ್ಲ


ಭಕ್ತಿ ಸಾಗರದಲ್ಲಿ ಮಿಂದು ಉತ್ತುಂಗಕ್ಕೇರಿದ್ದಡೇನು


ಬೇಡಿ ತಿಂಬ ಭಿಕ್ಷುಕನನ್ನಾದರು ಪ್ರೀತಿಯಿಂ ಕಾಣದಿದ್ದಡೆ


ಮೆಚ್ಚನು ನಮ್ಮ ಕಾನ್ ಮಲ್ಲೇಶ್ವರ

khan malleshwara vachana

ಸನ್ಮಾನ - ಅಭಿನಂದನೆಗೆ ಮಾನದಂಡವಿರಬೇಕು

ಸ್ವಾರ್ಥ - ಅಪೇಕ್ಷೆಗಳೇ ಮಾನದಂಡವಾಗಬಾರದು

ನಿಸ್ವಾರ್ಥ ಸಾಧಕನ ಕರೆದು ಸನ್ಮಾನಿಸಿದರೆ

ನಿನ್ನ ಪಾದಕ್ಕೆ ಪುಷ್ಪವೆರಚಿದಂತೆ

ಅನರ್ಹರನು ಸನ್ಮಾನಿಸಿ ಮೆರೆಸುವುದು

ಕತ್ತೆ, ಕಪ್ಪೆಗಳಿಗೆ ಲಗ್ನ ಮಾಡಿದಂತೆ ನೋಡ ಕಾನ್ ಮಲ್ಲೇಶ್ವರ

khan malleshwara vachana

ಜೀವನದಲ್ಲಿ ಅತಿ ಮುಖ್ಯವಾದದ್ದು ಭಾವನೆ

ಇದರಿಂದಲೇ ಜಗದಲ್ಲಿ ಎಲ್ಲ ಏರಿಳಿತ

ಇದಕ್ಕಿಲ್ಲ ಯಾವುದೇ ಎಲ್ಲೇ, ಸೀಮಿತ

ಭಾವದಿಂದಲ್ಲೇ ಹುಟ್ಟುವುದು ಪ್ರೀತಿ,ಭಕ್ತಿ, ಶಾಶ್ವತ

ಕಾನ್ ಮಲ್ಲೇಶನೆಡೆ ಹರಿದಾಗ ಆ ಭಾವ, ಅವನಾಗುವನು ಶ್ರೇಷ್ಠ ಭಕ್ತ

khan malleshwara vachana

ಸಂಬಂಧ ಕೆಡಿಸಲು ಸಣ್ಣ ಕಾರಣ ಸಾಕು

ಸಂಬಂಧ ವೃದ್ಧಿಸಲು ಸಾಹಸ ಪಡಬೇಕು

ಕ್ಷುಲ್ಲಕ ಕಾರಣಕ್ಕೆ ಸಂಬಂಧ ಕೆಡಿಸಿಕೊಂಡು

ಮಾನವೀಯತೆ ಮರೆವ ಮರುಳ ಮಾನವರ ಕಂಡು

ಮರುಕ ಪಡುವನು ನಮ್ಮ ಕಾನ್ ಮಲ್ಲೇಶ್ವರ

khan malleshwara vachana

ದ್ವೇಷ ಅಸೂಯೆ ಇಲ್ಲದ ಮನುಷ್ಯನಿಲ್ಲ

ಅದು ಸನ್ನಿವೇಶಕ್ಕೆ ಸೀಮಿತವಾಗಬೇಕು

ಇದ ರೂಡಿಸಿಕೊಂಡರೆ ನಮ್ಮನ್ನು ನಾವು

ಗೆದ್ದಂತೆ ಎಂದ ಕಾನ್ ಮಲ್ಲೇಶ್ವರ

khan malleshwara vachana - cast politics

ರಾಜಕೀಯ ರಾಡಿಯಲ್ಲಿ
ಜಾತಿಯೊಂದು ಜಾದುವಿಲ್ಲಿ
ಇದರ ಹೊರತು ಮಾತೆ ಇಲ್ಲ
ಅದರ ಅಡಿಯೇ ನಡೆವುದೆಲ್ಲ

ಸಚಿವ ಸ್ಥಾನ ನೀಡುವಾಗ,
ಸೂಕ್ತ ಖಾತೆ ಹಂಚುವಾಗ,
ಆಪ್ತರನ್ನು ನೇಮಿಸುವಾಗ,
ನಿಗಮ ಮಂಡಳಿ ನೇಮಕದಾಗ
ಜಾತಿ ಮಾತೆ ಜತನವಾಯ್ತು ತತ್ವ ನೀತಿ ಹಿಂದೆ ಬಿತ್ತು

ಜನರ ಎದುರು ಜಾತ್ಯತೀತ
ಜಾತಿ ಹೆಸರಲ್ಲಿ ನಡೆಸುವರು ಜಾಥಾ
ನಂಬಿದವರು ಹೊಡೆವರು ಖೋತಾ
ಕರುಣದಿ ಕಾಯೋ ಕಾನ್ ಮಲ್ಲೇಶ