ಅಂಜುಕುಳಿಗಳಿಗೆ ಅವಕಾಶವೇ ಸವಾಲು
ಮುನ್ನುಗ್ಗಿ ನಡೆವವಗೆ ಸವಾಲೇ ಅವಕಾಶ
ಸಿಕ್ಕ ಅವಕಾಶವ ಬಿಟ್ಟು ಮತ್ತೊಂದರ ಕನಸು
ಕಾಣುವವನು ಕೊನೆಗೆ ಸಾಧನೆ ಇಲ್ಲದೆ
ವೇದನೆ ಪಡುವನು ನೋಡಾ ಕಾನ್ ಮಲ್ಲೇಶ್ವರ
ಅಂಜುಕುಳಿಗಳಿಗೆ ಅವಕಾಶವೇ ಸವಾಲು
ಮುನ್ನುಗ್ಗಿ ನಡೆವವಗೆ ಸವಾಲೇ ಅವಕಾಶ
ಸಿಕ್ಕ ಅವಕಾಶವ ಬಿಟ್ಟು ಮತ್ತೊಂದರ ಕನಸು
ಕಾಣುವವನು ಕೊನೆಗೆ ಸಾಧನೆ ಇಲ್ಲದೆ
ವೇದನೆ ಪಡುವನು ನೋಡಾ ಕಾನ್ ಮಲ್ಲೇಶ್ವರ
ತಾತ್ಕಾಲಿಕ ಸಂತೋಷಕ್ಕಾಗಿ ಜೀವನದ ಮುಂದಿನ ಸಾಧನೆಗೆ ಸಿದ್ಧರಾಗಬೇಕಾದ ವಿದ್ಯಾರ್ಥಿ ಜೀವನವನ್ನು ವ್ಯರ್ಥ ಮಾಡಿಕೊಳ್ಳದೇ ಉಪಯುಕ್ತ ರೀತಿಯಲ್ಲಿ ಸಮಯವನ್ನು ಬಳಸಿಕೊಳ್ಳಬೇಕು.
ಅಸಾಧ್ಯವೆಂಬುದು ನಮ್ಮ ಆಲಸ್ಯದಿಂದ ಬರುತ್ತದೆಯೇ ಹೊರತು ನಿಜವಾಗಿ ಯಾವುದು ಅಸಾಧ್ಯ ಎಂಬುದಿಲ್ಲ. ಆದ್ದರಿಂದ ನಮ್ಮ ಉತ್ಸಾಹ ಮತ್ತು ಅದಕ್ಕೆ ತಕ್ಕ ಪ್ರಯತ್ನದಿಂದ ಅಸಾಧ್ಯವೆಂಬುದು ಸಾಧ್ಯವಾಗುತ್ತದೆ.
ವಿಧ್ಯಾರ್ಥಿಗಳ ಜೀವನದಲ್ಲಿ ಪೋಷಕರಷ್ಟೇ ಜವಾಬ್ದಾರಿ ಇರುವ ಮತ್ತೊಂದು ಪಾತ್ರವೆಂದರೆ ಶಿಕ್ಷಕರು. ಆದ್ದರಿಂದ ಕೇವಲ ಸರ್ಕಾರಿ ಶಾಲೆಯಲ್ಲಿ ಸಂಬಳಕ್ಕಾಗಿ ದುಡಿಯದೆ ನಿಮ್ಮ ಕೈಯಲ್ಲಿ ಈ ರಾಷ್ಟ್ರದ ಉತ್ತಮ ಪ್ರಜೆಗಳನ್ನು ತಯಾರಿಸುವ ಶಕ್ತಿ ಇದೆ ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ಕರ್ತವ್ಯ ನಿರ್ವಹಿಸಬೇಕು.
ನಾವು ಕಳೆಯುವ ಕಾಲವು ನಮ್ಮ ಬದುಕಿನಲ್ಲಿ ಮತ್ತೆಂದೂ ಸಿಗದ ವಸ್ತುವಾಗಿದ್ದರಿಂದ ಅದನ್ನು ಕ್ಷಣ ಕ್ಷಣವೂ ಅಮೂಲ್ಯವೆಂದು ಮನಸಿನಲ್ಲಿಟ್ಟುಕೊಂಡು ಸಮಯ ಕಳೆಯಬೇಕು.
ನಮ್ಮನ್ನು ಯಾವ ವಿಷಯದಲ್ಲಿ ನಾವು ತೊಡಗಿಸಿಕೊಳ್ಳುತ್ತೆವೆಯೋ ಆ ವಿಷಯದ ಮೌಲ್ಯಕ್ಕನುಸಾರವಾಗಿ ನಮ್ಮ ಫಲಿತಾಂಶ ದೊರಕುತ್ತದೆ. ಈ ಹಿನ್ನಲೆಯಲ್ಲಿ ಮಳೆ ಹನಿಯ ಭವಿಷ್ಯ ಅದು ಬೀಳುವ ಸ್ಥಳವನ್ನು ಆಧರಿಸಿರುತ್ತದೆ ಎಂಬ ಸಂಸ್ಕೃತ ಸುಭಾಷಿತದ ಉದಾಹರಣೆ ಅರ್ಥಗರ್ಭಿತವಾದದ್ದು.
ಕೇವಲ ವಿಧ್ಯಾವಂತನಾಗಿದ್ದರೆ ಸಾಲದು ಜೊತೆಗೆ ವಿಧ್ಯೆಗೆ ತಕ್ಕ ವಿವೇಕವನ್ನು ಹೊಂದಿದ್ದಾರೆ ಮಾತ್ರ ಆ ವಿಧ್ಯೆಗೆ ಸೂಕ್ತ ಗೌರವ ಸಲ್ಲುತ್ತದೆ.
ಕರ್ನಾಟಕ ರಾಜ್ಯದ ರಾಜಕಾರಣ
ತಲೆ ಕೆಳಗಾಗಲು ಯಾರು ಕಾರಣ ?
20 - 20 ರ ಒಪ್ಪಂದ
ಯಾಕೆ ಬಿತ್ತು ರಪ್ಪಂಥ ?
ಅಧಿಕಾರ ಹಿಡಿಯುವಾಗ ಅಪ್ಪನೇ ವಿರೋಧಿ
ಅಧಿಕಾರ ಕೊಡುವಾಗ ವರಿಷ್ಟರದ್ದೇ ಸರಧಿ
ಎಲ್ಲ ಮುಗಿದ ಮೇಲೆ ಕಣ್ಣೀರ ಕೋಡಿ
ಶಾಸಕರ ಮುಖಗಳು ಬಾಡಿ ಹೋಯ್ತು ನೋಡಿ
ಕುಮಾರಣ್ಣನಿಗೆ ಏನೂ ಇಲ್ಲ ಕಾರುಬಾರು
ಈಗ ಏನಿದ್ದರೂ ರಾಜ್ಯಪಾಲರದ್ದೇ ದರ್ಬಾರು
ಯಡಿಯೂರಣ್ಣನ ಯಾತ್ರೆ ಸುತ್ತುತ್ತಿದೆ ಊರೂರು
ಧರ್ಮಣ್ಣನ ದಂಡು ಸದ್ಯಕ್ಕೆ ಪಾರು
ಜನತೆ ಯಾರಿಗೆ ನೀಡುವರೋ ಕೆಂಪು ಗೂಟದ ಕಾರು ?
(ಅಧಿಕಾರ ಹಸ್ತಾಂತರ ವಿವಾದದ ಸಂದರ್ಭದಲ್ಲಿ ಬರೆದ ಕವನ {ಕುಮಾರಸ್ವಾಮಿಯವರಿಗೆ ನೇರವಾಗಿ ಕೊಟ್ಟು ಮುಜುಗರಕ್ಕೆ ಈಡು ಮಾಡಿದ್ದೆ ನವೆಂಬರ್ ೨೦೦೭})